*ಗಝಲ್-12*
[07/02, 5:49 p.m.]
ಲೆಕ್ಕವಿಲ್ಲದಷ್ಟು ಕಮರಿಗಳು ಬಂದವು ನನ್ನ ನಿನ್ನ ನಡುವೆ
ಅದೆಷ್ಟು ಬೇಗನೆ ದಿನಗಳು ಸವೆದವು ನನ್ನ ನಿನ್ನ ನಡುವೆ
ಎಲ್ಲಿಯ ನೆಲ್ಲಿ ಎಲ್ಲಿಯ ಲವಣ ಬೆಸೆಯಿತು ಅನುಬಂಧ
ಅದೆಷ್ಟೋ ಗೋಡೆಗಳು ಮೂಡಿದವು ನನ್ನ ನಿನ್ನ ನಡುವೆ
ಮೌನದಲ್ಲೂ ಇರುವ ವಿಷಯವದೇಕೊ ಅರ್ಥವಾಗಲಿಲ್ಲ
ಹೇಳದ ಮಾತುಗಳೆಷ್ಟೋ ಉಳಿದವು ನನ್ನ ನಿನ್ನ ನಡುವೆ
ಬಿಸಿಲ ತಾಪಕೆ ಜಗ್ಗದ ಹಿಮಬಂಡೆಗಳೆಷ್ಟೋ ಇನ್ನೂ ಇವೆ
ಕಂಡ ಕನಸುಗಳೇಕೋ ಕರಗಿಬಿಟ್ಟವು ನನ್ನ ನಿನ್ನ ನಡುವೆ
ಅದೆಷ್ಟೋ ಅಕ್ಷರಗಳು ತ್ರಿನೇತ್ರಜನೆದೆಯಿಂದ ಹಾಡಾದವು
ಪುಟಗಳೇಕೋ ಖಾಲಿಯಾಗೇ ಉಳಿದವು ನನ್ನ ನಿನ್ನ ನಡುವೆ
**** ***** ***** ****
✍🏼.. ತ್ರಿನೇತ್ರಜ
ಶಿವಕುಮಾರ. ಹಿರೇಮಠ.

No comments:
Post a Comment